ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್. ಜಾನಕಿ

ವಿಮಲ ನೀಲ ಜಲದೊಳೇನು
ಅಲೆಯ ಕಲಕಲ ಮೇಲಾ
ಒಲವನರಿಯನೆ ಮನದೊಳೇನು
ನಲಿವದ ಸಮಯ ಲೀಲಾ

ಈ ಲೀಲಾ ವಿಲಾಸ ವಿನೊದ ಕಾಣೆನು..
ಆನಂದ ಬಾನು ತುಂಬಿ ಜೇನು ತಂದನೆನು? |೨|
ಈ ಲೀಲಾ ವಿಲಾಸ!

ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ |೨|
ಮಧುರ ರಾಗ ಅನುರಾಗ ತಾಳಿ |೨|
ನೂತನ.. ಭಾವನ
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು? 
ಈ ಲೀಲಾ ವಿಲಾಸ!

ಸುಮವಿಗಾನ ವನಮೊಹ ಜಾಲ..
ಮೊರೆಯೆ ಗಂಗಾ ನವರಾಗ ಮಾಲ |೨|
ಬೆಳಗುತಾನೆ ನಿಜರೂಪ ಲೀಲ |೨|
ಕಾಣಲೇ.. ಕಾಣನು
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು? 
ಈ ಲೀಲಾ ವಿಲಾಸ!

ಮಧು ವಸಂತ ನೀ ತೋರು ನಾಮ..
ಆರವದನ ನಯನಾಭಿ ರಾಮ 
ಮಧು ವಸಂತ ನೀ ತೋರು ನಾಮ
ಗುಂಡಗಳಿರ ಇವನಾರು ಕಾಮ?
ಕಾಣಿರಾ.. ಕೇಳಿರಾ
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು? 
ಈ ಲೀಲಾ ವಿಲಾಸ ವಿನೊದ ಕಾಣೆನು
ಆನಂದ ಬಾನು ತುಂಬಿ ಜೇನು ತಂದನೆನು? 
ಈ ಲೀಲಾ ವಿಲಾಸ!

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ